ಚೀನಿ ಅಂತಃಕಲಹ ಏಪ್ರಿಲ್ ೧೯೨೭ರಿಂದ ಮೇ ೧೯೫೦ರ ವರೆಗೆ ಚೀನಾದಲ್ಲಿ ನಡೆದ ಒಂದು ಅಂತಃಕಲಹ. ಇದು ಚೀನಾದ ರಾಷ್ಟ್ರೀಯತಾವಾದಿ ಪಕ್ಷ ಕುಒಮಿಂಟಾಂಗ್ ಮತ್ತು ಚೀನಾದ ಕಮ್ಯುನಿಸ್ಟ್ ಪಕ್ಷಗಳ ನಡುವೆ ನಡೆಯಿತು. ಈ ಕಲಹ ಪ್ರಮುಖವಾಗಿ ಪಾಶ್ಚಾತ್ಯ ಬೆಂಬಲಿತ ರಾಷ್ಟ್ರೀಯತಾವಾದ ಮತ್ತು ಸೋವಿಯೆಟ್ ಒಕ್ಕೂಟ ಬೆಂಬಲಿತ ಸಮತಾವಾದ ಸಿದ್ಧಾಂತಗಳನ್ನು ಪ್ರತಿನಿಧಿಸಿತು.